ಭಾರತೀಯ ನದಿ ರೀವ ಅಥವಾ ರಿವರ್‌ ಟರ್ನ್ ( ) ಲಾರಿಡೆ ಕುಟುಂಬಕ್ಕೆ ಸೇರಿದ ಮೀನನ್ನೇ ಆಹಾರವನ್ನಾಗಿ ಅವಲಂಬಿಸಿದ ನದಿವಾಸಿ ಸ್ಥಳೀಯ ಹಕ್ಕಿ . ಇದು ಇರಾನ್ ಪೂರ್ವದಿಂದ ಭಾರತೀಯ ಉಪಖಂಡ ವನ್ನೂ ಒಳಗೊಂಡಂತೆ ಮ್ಯಾನ್ಮಾರ್‌ನಿಂದ ಥೈಲ್ಯಾಂಡ್‌ ವರೆಗೂ ಪ್ರಸಿರಿಸಿದೆ. ಅಷ್ಟೇನೂ ಸಾಮಾನ್ಯವಾಗಿ ಕಾಣಸಿಗದ ಈ ಹಕ್ಕಿ, ಕೆರೆ-ಕಟ್ಟೆ-ಸರೋವರ -ನದಿಯಂತಹ ಸಿಹಿನೀರನ ಪ್ರದೇಶಗಳಲ್ಲಿ, ಅಪರೂಪಕ್ಕೆ ಉಬ್ಬರವಿಳಿತವಿರುವ ಸಮುದ್ರದ ತೊರೆಗಳಲ್ಲಿಯೂ ಕಾಣಸಿಗುತ್ತವೆ. ನಿರ್ಜನ ನದಿಯ ಮರಳುದಂಡೆಯಲ್ಲಿ ಮಾರ್ಚ್‌ -ಮೇ ತಿಂಗಳ ಅವಧಿಯಲ್ಲಿ ವಂಶಾಭಿವೃದ್ಧಿ ನಡೆಸುತ್ತವೆ. ಮರಳು ಅಥವಾ ಬಂಡೆಗಳ ಮೇಲೆ ನೇರವಾಗಿ, ಮೂರು ಹಸುರು-ಬೂದು ಬಣ್ಣದಿಂದ ಹಿಡಿದು ಮಾಸಲು ಬಣ್ಣವಿರತುವ, ಕಂದು ಗೆರೆ ಅಥವಾ ಮಚ್ಛೆಯಿಂದಾವೃತ್ತ ಮೊಟ್ಟೆಗಳನ್ನಿಡುತ್ತವೆ. ನದಿ ರೀವ ಮಧ್ಯಮ ಗಾತ್ರದ ಹಕ್ಕಿ. 38-43 ಸೆಂ.ಮೀ ಉದ್ದವಿದ್ದು, ಮೇಲ್ಭಾಗ ಗಾಢ ಬೂದುಬಣ್ಣ, ಬಿಳಿಯ ಕೆಳಭಾಗ, ಬಳಕುವ ಸೀಳು ಬಾಲ, ಉದ್ದನೆಯ ಹಾರುರೆಕ್ಕೆಯ ತುದಿಗಳು ಚೂಪಾಗಿರುತ್ತವೆ. ಹಳದಿ ಕೊಕ್ಕು, ಕೆಂಪು ಕಾಲು; ಸಂತಾನ ಸಮಯದಲ್ಲಿ ತಲೆ ಕಪ್ಪು. ಚಳಿಗಾಲದಲ್ಲಿ ತಲೆ ಬೂದುಬಿಳಿಯಾಗಿದ್ದು, ಚುಕ್ಕೆ ಗೆರೆಗಳಿಂದ ಆವೃತವಾಗಿರುತ್ತದೆ. ಈ ಸಮಯದಲ್ಲಿ ಕಣ್ಣಿನ ಮೇಲೆ ಕಪ್ಪು ಬಣ್ಣದ ಪಟ್ಟಿ ಇದ್ದು, ಕೊಕ್ಕಿನ ತುದಿ ತೆಳು ಬೂದುಬಣ್ಣದ್ದಾಗಿರುತ್ತದೆ. ಗಂಡು ಹೆಣ್ಣುಗಳನ್ನು ಕೇವಲ ನೋಟದಿಂದ ಗುರುತಿಸಲು ಸಾಧ್ಯವಿಲ್ಲ, ಒಂದೇ ರೀತಿ ಕಾಣುತ್ತವೆ. ಆದರೆ ಅವಯಸ್ಕ ಹಕ್ಕಿಗಳು ಕಂದು ಬಣ್ಣದ ತಲೆ, ಬೂದು-ಕಂದು ಮೇಲ್ಭಾಗ, ಬೂದು ಎದೆ, ಬಿಳಿ ಕೆಳಭಾಗ, ಮತ್ತು ಕಪ್ಪು ತುದಿಯಿರುವ ಹಳದಿ ಬಣ್ಣದ ಕೊಕ್ಕನ್ನು ಹೊಂದಿರುತ್ತವೆ. ಇತರ ಸ್ಟರ್ನಾ () ರೀವಗಳಂತೆ, ನದಿಗಳು, ಸರೋವರಗಳು ಮತ್ತು ಕೆರೆಕಟ್ಟೆಗಳಲ್ಲಿ ಮೀನು, ಕಠಿಣಚರ್ಮಿ, ಗೊದಮೊಟ್ಟೆ ಮತ್ತು ಜಲವಾಸಿ ಕೀಟಗಳನ್ನು ಧುಮುಕಿ ಹಿಡಿದು ಆಹಾರವನ್ನಾಗಿ ಸೇವಿಸುತ್ತವೆ. ಆವಾಸಸ್ಥಾನದ ಮಾಲಿನ್ಯದಿಂದಾಗಿ ಇವುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. == ಉಲ್ಲೇಖಗಳು == , ': , 0-7470-1410-8 == ಬಾಹ್ಯ ಕೊಂಡಿಗಳು == ಅಮೋಘವರ್ಷ ಜೆಎಸ್ ಅವರ ರಿವರ್ ಟರ್ನ್ಸ್ ಜೀವನದ ಕುರಿತಾದ ಸಾಕ್ಷ್ಯಚಿತ್ರ ಟೆಂಪ್ಲೇಟು: